Product SiteDocumentation Site

Red Hat Enterprise Linux 6

Release Notes

Red Hat Enterprise Linux 6.5 ಗಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 5

Red Hat ಇಂಜಿನಿಯರಿಂಗ್ ಕಂಟೆಂಟ್ ಸರ್ವಿಸಸ್


Legal Notice

Copyright © 2013 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
Red Hat Enterprise Linux 6.5 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. 6.5 ಗಾಗಿನ Red Hat Enterprise Linux ಗೆ ಮಾಡಲಾದ ಅಪ್‌ಡೇಟ್‌ನ ಕುರಿತದಾದ ವಿವರವಾದ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ

ಮುನ್ನುಡಿ
1. ಕರ್ನಲ್
2. ಜಾಲಬಂಧ
3. ಸುರಕ್ಷತೆ
4. ಚಂದಾದಾರಿಕೆ ವ್ಯವಸ್ಥಾಪನೆ
5. ವರ್ಚುವಲೈಸೇಶನ್
5.1. KVM
5.2. Microsoft Hyper-V
5.3. VMware
6. ಶೇಖರಣೆ
7. ಕ್ಲಸ್ಟರಿಂಗ್
8. ಯಂತ್ರಾಂಶ ಸಕ್ರಿಯಗೊಳಿಕೆ
9. ಇಂಡಂಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್
10. ಡೆಸ್ಕ್‍ಟಾಪ್ ಮತ್ತು ಗ್ರಾಫಿಕ್ಸ್
11. ಕಾರ್ಯನಿರ್ವಹಣೆ ಮತ್ತು ಸ್ಕೇಲೆಬಿಲಿಟಿ
12. ಕಂಪೈಲರ್ ಹಾಗು ಉಪಕರಣಗಳು
A. ಘಟಕದ ಆವೃತ್ತಿಗಳು
B. ಪರಿಷ್ಕರಣ ಇತಿಹಾಸ

ಮುನ್ನುಡಿ

Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.5 ಬಿಡುಗಡೆ ಟಿಪ್ಪಣಿಗಳಲ್ಲಿನ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಕಿರು ಬಿಡುಗಡೆಯಲ್ಲಿ ಮಾಡಲಾದ ಬದಲಾವಣೆಗಳ (ಅಂದರೆ ದೋಷಗಳನ್ನು ಸರಿಪಡಿಸಲಾಗಿದೆ, ಸುಧಾರಣೆಗಳನ್ನು ಸೇರಿಸಲಾಗಿದೆ, ಗೊತ್ತಿರುವ ವಿಷಯಗಳನ್ನು ಕಂಡುಹಿಡಿಯಲಾಗಿದೆ) ವಿವರಣೆಗಳಿಗಾಗಿ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ. ಈ ತಾಂತ್ರಿಕ ಟಿಪ್ಪಣಿಗಳ ದಸ್ತಾವೇಜಿನಲ್ಲಿ ಪ್ರಸಕ್ತ ಲಭ್ಯವಿರುವ ಎಲ್ಲಾ ತಂತ್ರಜ್ಞಾನ ಮುನ್ನೋಟಗಳನ್ನು ಒದಗಿಸುವ ಪ್ಯಾಕೇಜುಗಳ ಜೊತೆಗೆ ಅವುಗಳ ಪಟ್ಟಿಯನ್ನೂ ಸಹ ನೀಡಲಾಗಿದೆ.

ಪ್ರಮುಖ ಅಂಶ

Red Hat Enterprise Linux 6.5 ಬಿಡುಗಡೆ ಟಿಪ್ಪಣಿಗಳ ಆನ್‌ಲೈನ್‌ಆವೃತ್ತಿಯನ್ನು ನಿಶ್ಚಿತವಾದ, ಅಪ್‌-ಟು-ಡೇಟ್ ಆದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಬಿಡುಗಡೆ ಸಂಬಂಧಿಸಿದ ಸಂದೇಹಗಳನ್ನು ಹೊಂದಿರುವ ಗ್ರಾಹಕರು ತಮ್ಮಲ್ಲಿರುವ Red Hat Enterprise Linux ನ ಆವೃತ್ತಿಗೆ ಸೂಕ್ತವಾದ ಆನ್‌ಲೈನ್‌ನಲ್ಲಿನ ಬಿಡುಗಡೆ ಮತ್ತು ತಾಂತ್ರಿಕ ಟಿಪ್ಪಣಿಗಳನ್ನು ನೋಡುವಂತೆ ಸಲಹೆ ಮಾಡಲಾಗುತ್ತದೆ.
Red Hat Enterprise Linux ಜೀವನಚಕ್ರದ ಅಗತ್ಯವಿದೆಯೆ, ಹಾಗಿದ್ದಲ್ಲಿ https://access.redhat.com/support/policy/updates/errata/ ಅನ್ನು ನೋಡಿ.

ಅಧ್ಯಾಯ 1. ಕರ್ನಲ್

Red Hat Enterprise Linux 6.5 ರೊಂದಿಗೆ ಒದಗಿಸಲಾಗಿರುವ ಕರ್ನಲ್‌ನಲ್ಲಿ ಅದಕ್ಕೆ ಅನ್ವಯಿಸಲಾಗಿರುವ ನೂರಾರು ದೋಷ ನಿವಾರಣೆಗಳು ಹಾಗು ಸುಧಾರಣೆಗಳನ್ನು ಒದಗಿಸಲಾಗಿರುತ್ತದೆ. ನಿವಾರಿಸಲಾದ ಪ್ರಮುಖ ದೋಷಗಳು ಹಾಗು ಕರ್ನಲ್‌ಗೆ ಮಾಡಲಾದ ಸುಧಾರಣೆಗಳ ಕುರಿತಾದ ವಿವರಗಳಿಗಾಗಿ Red Hat Enterprise Linux ನ 6.5 ರ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

PMC-ಸಿಯೆರಾ ಕಾರ್ಡುಗಳು ಮತ್ತು ನಿಯಂತ್ರಕಗಳಿಗೆ ಬೆಂಬಲ

pm8001/pm80xx ಚಾಲಕವು PMC-ಸಿಯೆರಾ ಅಡಾಪ್ಟೆಕ್ ಸೀರೀಸ್ 6H ಮತ್ತು 7H SAS/SATA HBA ಕಾರ್ಡುಗಳಿಗೆ ಹಾಗೂ PMC ಸಿಯೆರಾ 8081, 8088, ಮತ್ತು 8089 ಚಿಪ್ ಆಧರಿತವಾದ SAS/SATA ನಿಯಂತ್ರಕಗಳಿಗೆ ಬೆಂಬಲವನ್ನು ಸೇರಿಸುತ್ತದೆ.

ಪ್ರತಿಕ್ರಿಯೆ ನೀಡದ ಸಾಧನಗಳಿಗಾಗಿ ಸಂರಚಿಸಬಹುದಾದ ಸಮಯತೀರಿಕೆ

ಕೆಲವೊಂದು ಶೇಖರಣಾ ಸಂರಚನೆಗಳಲ್ಲಿ (ಉದಾಹರಣೆಗೆ, ಹಲವಾರು LUNಗಳನ್ನು ಹೊಂದಿರುವ ಸಂರಚನೆಗಳು), SCSI ದೋಷ ನಿಭಾಯಿಸುವ ಸಂಕೇತವು (ಕೋಡ್) ಪ್ರತಿಕ್ರಿಯೆ ನೀಡದ ಶೇಖರಣಾ ಸಾಧನಗಳಿಗೆ TEST UNIT READY ಯಂತಹ ಆದೇಶಗಳನ್ನು ನೀಡಲು ದೊಡ್ಡ ಪ್ರಮಾಣದ ಸಮಯವನ್ನು ತೆಗೆದುಕೊಳ್ಳಬಲ್ಲದು. ಒಂದು ಹೊಸ sysfs ನಿಯತಾಂಕವಾದ eh_timeout ಎನ್ನುವುದನ್ನು SCSI ಸಾಧನ ವಸ್ತುವಿಗೆ ಸೇರಿಸಲಾಗಿದೆ, ಇದ SCSI ದೋಷ ನಿಭಾಯಿಸುವ ಸಂಕೇತದಿಂದ ಬಳಸಲಾಗುವ TEST UNIT READY ಮತ್ತು REQUEST SENSE ಆದೇಶಗಳಿಗಾಗಿ ಸಮಯತೀರಿಕೆಯ ಮೌಲ್ಯವನ್ನು ಹೊಂದಿಸಲು ಸಂರಚನೆಯನ್ನು ಅನುಮತಿಸುತ್ತದೆ. ಇದರಿಂದಾಗಿ ಈ ರೀತಿಯ ಪ್ರತಿಕ್ರಿಯೆ ನೀಡದ ಸಾಧನಗಳನ್ನು ಪರಿಶೀಲಿಸಲು ವ್ಯಯಿಸಲು ಸಮಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. eh_timeout ನ ಪೂರ್ವನಿಯೋಜಿತ ಮೌಲ್ಯವು 10 ಸೆಕೆಂಡುಗಳಾಗಿರುತ್ತದೆ, ಇದು ಈ ಸೌಲಭ್ಯವನ್ನು ಸೇರಿಸಲು ಮುಂಚಿನ ಸಮಯತೀರಿಕೆಯ ಮೌಲ್ಯವಾಗಿರುತ್ತದೆ.

ದೋಷ ಮರುಗಳಿಕೆಗಾಗಿ ಗರಿಷ್ಟ ಸಮಯದ ಸಂರಚನೆ

ಒಂದು ಹೊಸ sysfs ನಿಯತಾಂಕವಾದ eh_deadline ಅನ್ನು SCSI ಆತಿಥೇಯ ವಸ್ತುವಿಗೆ ಸೇರಿಸಲಾಗಿದೆ, ಇದು SCSI ದೋಷ ನಿಭಾಯಿಸುವಿಕೆಯ ದೋಷ ಮರುಗಳಿಕೆ ಮಾಡುವ ಪ್ರಯತ್ನವನ್ನು ನಿಲ್ಲಿಸಿ ಸಂಪೂರ್ಣ ಹೋಸ್ಟ್ ಬಸ್ ಅಡಾಪ್ಟರ್ (HBA) ಅನ್ನು ಮರುಹೊಂದಿಸುವ ಮೊದಲು ಆ ಪ್ರಯತ್ನಕ್ಕೆ ತಗುಲುವ ಗರಿಷ್ಟ ಪ್ರಮಾಣದ ಸಮಯವನ್ನು ಸಂರಚಿಸುವುದನ್ನು ಸಕ್ರಿಯಗೊಳಿಸುತ್ತದೆ. ನಿಯತಾಂಕದ ಮೌಲ್ಯವನ್ನು ಸೆಕೆಂಡುಗಳಲ್ಲಿ ಸೂಚಿಸಲಾಗುತ್ತದೆ, ಪೂರ್ವನಿಯೋಜಿತ ಮೌಲ್ಯವು ಸೊನ್ನೆ ಆಗಿದ್ದು, ಇದು ಸಮಯದ ಮಿತಿಯನ್ನು ತೆಗೆದುಹಾಕಿ ಎಲ್ಲಾ ದೋಷ ಮರುಗಳಿಕೆಯು ಜರುಗುವಂತೆ ಮಾಡುತ್ತದೆ. sysfs ಅನ್ನು ಬಳಸುವುದರ ಜೊತೆಗೆ, eh_deadline ಕರ್ನಲ್ ನಿಯತಾಂಕವನ್ನು ಬಳಸಿಕೊಂಡು ಎಲ್ಲಾ SCSI HBAಗಳಿಗಾಗಿ ಒಂದು ಪೂರ್ವನಿಯೋಜಿತ ಮೌಲ್ಯವನ್ನು ಹೊಂದಿಸಬಹುದು.

Lenovo X220 ಟಚ್‌ಸ್ಕ್ರೀನ್‌ ಬೆಂಬಲ

Red Hat Enterprise Linux 6.5 ಈಗ Lenovo X220 ಟಚ್‌ಸ್ಕ್ರೀನ್‌ ಅನ್ನು ಬೆಂಬಲಿಸುತ್ತದೆ.

ಅಧ್ಯಾಯ 2. ಜಾಲಬಂಧ

ಪ್ರಿಸಿಶನ್ ಟೈಮ್ ಪ್ರೊಟೊಕಾಲ್ ಸಿದ್ಧತೆ

Linux ಗಾಗಿನ IEEE ಸ್ಟಾಂಡರ್ಡ್ 1588-2008 ಅನುಗುಣವಾಗಿರುವ ಪ್ರಿಸಿಶನ್ ಟೈಮ್ ಪ್ರೊಟೊಕಾಲ್‌ನ (PTP) ಒಂದು ಅಳವಡಿಕೆಯನ್ನು Red Hat Enterprise Linux 6.4 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. PTP ಮೂಲಭೂತ ವ್ಯವಸ್ಥೆ, ಕರ್ನಲ್ ಮತ್ತು ಬಳಕೆದಾರ ಸ್ಥಳ ಎರಡೂ ಸಹ, ಈಗ Red Hat Enterprise Linux 6.5 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿವೆ. ಜಾಲಬಂಧ ಚಾಲಕ ಸಮಯ ಮುದ್ರೆಯ ಬೆಂಬಲದಲ್ಲಿ ಈಗ ಈ ಕೆಳಗಿನ ಚಾಲಕಗಳೂ ಸಹ ಇವೆ: bnx2x, tg3, e1000e, igb, ixgbe, ಮತ್ತು sfc.

ಸಂರಚನೆಯಲ್ಲದ IP ಮಲ್ಟಿಕ್ಯಾಸ್ಟ್ IGMP ಗೂಢಚಾರಿಕೆ ದತ್ತಾಂಶದ ವಿಶ್ಲೇಷಣೆ

ಈ ಹಿಂದೆ, ಬ್ರಿಜ್ ಮಾಡ್ಯೂಲ್ sysfs ವರ್ಚುವಲ್ ಕಡತ ವ್ಯವಸ್ಥೆಯು ಸಂರಚನೆಯಲ್ಲದ IP ಮಲ್ಟಿಕ್ಯಾಸ್ಟ್ ಇಂಟರ್ನೆಟ್ ಗ್ರೂಪ್ ಮ್ಯಾನೇಜ್ಮೆಮಟ್ ಪ್ರೊಟೊಕಾಲ್ (IGMP) ಗೂಢಚಾರ ದತ್ತಾಂಶವನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಒದಗಿಸುತ್ತಿರಲಿಲ್ಲ. ಈ ಸೌಲಭ್ಯವು ಇಲ್ಲದೆ ಬಳಕೆದಾರರು ತಮ್ಮ ಮಲ್ಟಿಕ್ಯಾಸ್ಟ್ ಸಂಚಾರವನ್ನು ವಿಶ್ಲೇಷಿಸಲು ಸಾಧ್ಯವಾಗುತ್ತಿರಲಿಲ್ಲ. Red Hat Enterprise Linux 6.5 ನಲ್ಲಿ, ಬಳಕೆದಾರರು ಪತ್ತೆ ಮಾಡಲಾದ ಮಲ್ಟಿಕ್ಯಾಸ್ಟ್ ರೌಟರ್ ಸಂಪರ್ಕಸ್ಥಾನಗಳು, ಸಕ್ರಿಯ ಚಂದಾದಾರರನ್ನು ಹೊಂದಿರುವ ಗುಂಪುಗಳು ಮತ್ತು ಸಂಬಂಧಿಸಿ ಸಂಪರ್ಕಸಾಧನಗಳನ್ನು ಪಟ್ಟಿ ಮಾಡಲು ಸಾಧ್ಯವಾಗುತ್ತದೆ.

NetworkManager ನಲ್ಲಿ PPPoE ಸಂಪರ್ಕಗಳ ಬೆಂಬಲ

ಪಾಯಿಂಟ್-ಟು-ಪಾಯಿಂಟ್ ಪ್ರೊಟೊಕಾಲ್ ಓವರ್ ಇತರ್ನೆಟ್ (PPPoE) ಆಧರಿತವಾದ ಸಂಪರ್ಕಗಳನ್ನು, ಉದಾಹರಣೆಗೆ, DSL, ISDN, ಮತ್ತು VPN ಸಂಪರ್ಕದಲ್ಲಿ ಬಳಸಲಾಗುವಂತಹ ಸಂಪರ್ಕಗಳನ್ನು ಬೆಂಬಲಿಸುವಂತೆ NetworkManager ಅನ್ನು ಸುಧಾರಿಸಲಾಗಿದೆ.

OpenStack ಗಾಗಿ ನೆಟ್‌ವರ್ಕ್ ನೇಮ್‌ಸ್ಪೇಸ್ ಬೆಂಬಲ

ನೆಟ್‌ವರ್ಕ್ ನೇಮ್‌ಸ್ಪೇಸಸ್ (netns) ಎನ್ನುವುದು ಒಂದು ಹಗುರತೂಕದ ಕಂಟೇನರ್-ಆಧರಿತವಾದ ವರ್ಚುವಲೈಸೇಶನ್ ತಂತ್ರಜ್ಞಾನವಾಗಿದೆ. ಒಂದು ವರ್ಚುವಲ್ ಜಾಲಬಂಧ ಸ್ಟ್ಯಾಕ್ ಅನ್ನು ಪ್ರಕ್ರಿಯೆ ಗುಂಪಿನೊಂದಿಗೆ ಜೊತೆಗೂಡಿಸಲು ಸಾಧ್ಯವಿರುತ್ತದೆ. ಪ್ರತಿಯೊಂದು ನೇಮ್‌ಸ್ಪೇಸ್‌ ಸಹ ತನ್ನದೆ ಆದ ಲೂಪ್‌ಬ್ಯಾಕ್ ಸಾಧನ ಮತ್ತು ಪ್ರಕ್ರಿಯೆ ಸ್ಥಳವನ್ನು ಹೊಂದಿರುತ್ತದೆ. ಪ್ರತಿಯೊಂದು ಜಾಲಬಂಧ ನೇಮ್‌ಸ್ಪೇಸ್‌ಗೂ ಸಹ ವರ್ಚುವಲ್ ಅಥವ ನಿಜವಾದ ಸಾಧನಗಳನ್ನು ಸೇರಿಸಲು ಸಾಧ್ಯವಿರುತ್ತದೆ, ಮತ್ತು ಬಳಕೆದಾರರು ಈ ಸಾಧನಗಳಿಗೆ IP ವಿಳಾಸಗಳನ್ನು ನಿಯೋಜಿಸಲು ಹಾಗೂ ಅವುಗಳನ್ನು ಜಾಲಬಂಧ ನೋಡ್ ಆಗಿ ಬಳಸಲು ಸಾಧ್ಯವಿರುತ್ತದೆ.

ಕ್ರಿಪ್ಟೋಗ್ರಫಿ ಹ್ಯಾಶ್ ಸೌಲಭ್ಯವನ್ನು ಬದಲಾಯಿಸಲು SCTP ಬೆಂಬಲ

Red Hat Enterprise Linux 6.5 ನಲ್ಲಿ, ಬಳಕೆದಾರರು ಸ್ಟ್ರೀಮ್ ಕಂಟ್ರೋಲ್ ಟ್ರಾನ್ಸಮಿಶನ್ ಪ್ರೊಟೊಕಾಲ್ (SCTP) ಸಂಪರ್ಕಗಳಿಗಾಗಿ ಕ್ರಿಪ್ಟೊಗ್ರಫಿ ಹ್ಯಾಶ್ ಸೌಲಭ್ಯವನ್ನು MD5 ಇಂದ SHA1 ಗೆ ಬದಲಾಯಿಸಲು ಸಾಧ್ಯವಿರುತ್ತದೆ.

SCTP ಗಾಗಿ M3UA ಅಳತೆ ಮಾಡುವ ಕೌಂಟರುಗಳು

ಮೆಸೇಜ್ ಟ್ರಾನ್ಸಫರ್ ಲೆವೆಲ್ 3 ಯೂಸರ್ ಅಡಾಪ್ಶನ್ ಲೇಯರ್ (M3UA) ಎನ್ನುವುದು ಸಾಂಪ್ರದಾಯಿಕ ಟೆಲಿಕಮ್ಯುನಿಲಕೇಶನ್‌ಗಳ ಜಾಲಬಂಧಗಳ (ISDN ಮತ್ತು PSTN) ಬದಲಿಗೆ ಸ್ಟ್ರೀಮ್ ಕಂಟ್ರೋಲ್ ಟ್ರಾನ್ಸಮಿಶನ್ ಪ್ರೊಟೊಕಾಲ್ (SCTP) ಅನ್ನು ಬಳಸಿಕೊಂಡು IP ಮುಖಾಂತರ MTP ಲೆವೆಲ್ 3 ಯೂಸರ್ ಪಾರ್ಟ್ ಸಿಗ್ನಲಿಂಗ್ ಸಂದೇಶಗಳನ್ನು ರವಾನಿಸಲು ಬಳಸುವ IETF ಶಿಷ್ಟತೆಯಿಂದ ವಿವರಿಸಲಾದ ಒಂದು ಪ್ರೊಟೊಕಾಲ್ ಆಗಿದೆ.

iproute ಬಳಸಿಕೊಂಡು DOVE ಟನಲ್‌ಗಳನ್ನು ನಿರ್ವಹಿಸುವಿಕೆ

ಡಿಸ್ಟ್ರಿಬ್ಯೂಟೆಡ್ ಓವರ್ಲೇ ವರ್ಚುವಲ್ ಇತರ್ನೆಟ್ (DOVE) ಟನಲ್‌ಗಳು ವರ್ಚುವಲ್ ಎಕ್ಸ್‍ಟೆನ್ಸಿಬಲ್ ಲೋಕಲ್ ಏರಿಯಾ ನೆಟ್‌ವರ್ಕುಗಳನ್ನು (VXLAN) ರಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ, ಇದು ISO OSI ಲೇಯರ್ 2 ಜಾಲಬಂಧಗಳಿಗಾಗಿ ಕ್ಲೌಡ್ ಕೇಂದ್ರಗಳಲ್ಲಿ ಬಳಸಲಾದ ಸ್ಕೇಲೆಬಲ್ ಪರಿಹಾರವನ್ನು ಪ್ರತಿನಿಧಿಸುತ್ತದೆ. bridge ಉಪಕರಣವು iproute ಪ್ಯಾಕೇಜಿನ ಒಂದು ಭಾಗವಾಗಿರುತ್ತದೆ ಮತ್ತು ಇದನ್ನು ಉದಾಹರಣೆಗೆ Linux ಪ್ಲಾಟ್‌ಫಾರ್ಮಿನಲ್ಲಿನ VXLAN ಸಾಧನಗಳಲ್ಲಿ ಫಾರ್ವಾರ್ಡಿಂಗ್ ದತ್ತಸಂಚಯವನ್ನು ನಿರ್ವಹಿಸಲು ಬಳಸಬಹುದಾಗಿರುತ್ತದೆ.

ಅಧ್ಯಾಯ 3. ಸುರಕ್ಷತೆ

FIPS 140-2 ಪ್ರಮಾಣಪತ್ರಕ್ಕೆ ಸಂಬಂಧಿಸಿದ ಬದಲಾವಣೆಗಳು

Red Hat Enterprise Linux 6.5 ನಲ್ಲಿ, dracut-fips ಪ್ಯಾಕೇಜು ಅಸ್ತಿತ್ವದಲ್ಲಿದ್ದಾಗ, ಕರ್ನಲ್ FIPS ಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದೆಯೆ ಅಥವ ಇಲ್ಲವೆ ಎನ್ನುದರ ಮೇಲೆ ಅವಲಂಬಿತವಾಗಿರದೆ, ಸಮಗ್ರತೆಯ ಪರಿಶೀಲನೆಯನ್ನು ನಡೆಸಲಾಗುತ್ತದೆ. Red Hat Enterprise Linux 6.5 FIPS 140-2 ಅನುವರ್ತನೆಯಾಗಿರುವಂತೆ ಮಾಡುವ ಕುರಿತಾದ ವಿವರವಾದ ಮಾಹಿತಿಗಾಗಿ ಈ ಕೆಳಗಿನ ನಾಲೆಜ್ ಬೇಸ್ ಪರಿಹಾರವನ್ನು ನೋಡಿ:

OpenSSL ಅನ್ನು ಆವೃತ್ತಿ 1.0.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ

ಈ ಅಪ್‌ಡೇಟ್‌ GlusterFS ನಲ್ಲಿ ಪಾರದರ್ಶಕ ಗೂಢಲಿಪೀಕರಣ ಮತ್ತು ದೃಢೀಕರಣ ಬೆಂಬಲಕ್ಕಾಗಿ ಅಗತ್ಯವಿರುವ ಈ ಕೆಳಗಿನ ಸಿಫರುಗಳನ್ನು ಸೇರಿಸುತ್ತದೆ:
 • CMAC (ಸಿಫರ್-ಆಧರಿತ MAC)
 • XTS (XEX ಟ್ವೀಕೆಬಲ್ ಬ್ಲಾಕ್ ಸಿಫರ್ ವಿತ್ ಸಿಫರ್ಟೆಕ್ಸ್ಟ್ ಸ್ಟೀಲಿಂಗ್)
 • GCM (Galois/ಕೌಂಟರ್ ಮೋಡ್)

OpenSSH ನಲ್ಲಿ ಸ್ಮಾರ್ಟ್ ಕಾರ್ಡ್ ಬೆಂಬಲ

OpenSSH ಈಗ PKCS #11 ಶಿಷ್ಟತೆಯೊಂದಿಗೆ ಅನುವರ್ತನೆಯಾಗಿರುತ್ತದೆ, ಇದು ಸ್ಮಾರ್ಟಕಾರ್ಡುಗಳಲ್ಲಿ ದೃಢೀಕರಣಕ್ಕಾಗಿ OpenSSH ಅನ್ನು ಬಳಸುವುದನ್ನು ಸಕ್ರಿಯಗೊಳಿಸುತ್ತದೆ.

OpenSSL ನಲ್ಲಿ ECDSA ಬೆಂಬಲ

ಎಲಿಪ್ಟಿಕಲ್ ಕರ್ವ್ ಡಿಜಿಟಲ್ ಸಿಗ್ನೇಚರ್ ಅಲ್ಗಾರಿತಮ್ (ECDSA) ಎನ್ನುವುದು ಎಲಿಪ್ಟಿಕಲ್ ಕರ್ವ್ ಕ್ರಿಪ್ಟೊಗ್ರಫಿ (ECC) ಅನ್ನು ಬಳಸುವ ಡಿಜಿಟಲ್ ಸಿಗ್ನೇಚರ್ ಅಲ್ಗಾರಿತಮ್‌ನ (DSA) ಒಂದು ಆವೃತ್ತಿಯಾಗಿದೆ. ಕೇವಲ nistp256 ಮತ್ತು nistp384 ಕರ್ವುಗಳನ್ನು ಮಾತ್ರ ಬೆಂಬಲಿಸಲಾಗುತ್ತದೆ ಎನ್ನುವುದನ್ನು ನೆನಪಿಡಿ.

OpenSSL ನಲ್ಲಿ ECDHE ಬೆಂಬಲ

ಎಫರ್ಮಲ್ ಎಲಿಪ್ಟಿಕಲ್ ಕರ್ವ್ ಡಿಫಿ-ಹೆಲ್ಮಾನ್ (ECDHE) ಬೆಂಬಲಿತವಾಗಿದೆ, ಇದು ಬಹಳ ಕಡಿಮೆ ಕಂಪ್ಯೂಟೇಶನಲ್ ಅಗತ್ಯತೆಗಳೊಂದಿಗೆ ಪರ್ಫೆಕ್ಸ್ ಫಾರ್ವಾರ್ಡ್ ಸಿಕ್ರೆಸಿಗೆ ಅನುಮತಿಸುತ್ತದೆ.

OpenSSL ಮತ್ತು NSS ನಲ್ಲಿ TLS 1.1 ಮತ್ತು 1.2 ನ ಬೆಂಬಲ

OpenSSL ಮತ್ತು NSS ಈಗ ಟ್ರಾನ್ಸಪೋರ್ಟ್ ಲೇಯರ್ ಸೆಕ್ಯುರಿಟಿ (TLS) ಪ್ರೊಟೊಕಾಲ್‌ನ ಇತ್ತೀಚಿನ ಆವೃತ್ತಿಗಳನ್ನು ಬೆಂಬಲಿಸುತ್ತವೆ, ಇದು ಜಾಲಬಂಧ ಸಂಪರ್ಕಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಇತರೆ TLS ಪ್ರೊಟೊಕಾಲ್ ಅಳವಡಿಕೆಗಳೊಂದಿಗೆ ಪೂರ್ಣಪ್ರಮಾಣದ ಇಂಟರ್ಆಪರೇಬಿಲಿಟಿಯನ್ನು ಸಕ್ರಿಯಗೊಳಿಸುತ್ತದೆ. TLS ಪ್ರೊಟೊಕಾಲ್, ಕ್ಲೈಂಟ್-ಸರ್ವರ್ ಅನ್ವಯಗಳು ಕದ್ದಾಲಿಕೆ ದುರುದ್ಧೇಶದ ಹಸ್ತಕ್ಷೇಪವನ್ನು ತಪ್ಪಿಸಲು ವಿನ್ಯಾಸಗೊಳಿಸಲಾದ ಮಾರ್ಗದ ಮುಖಾಂತರ ಒಂದು ಜಾಲಬಂಧದಲ್ಲಿ ವ್ಯವಹರಿಸಲು ಅನುವು ಮಾಡಿಕೊಡುತ್ತದೆ.

HMAC-SHA2 ಅಲ್ಗಾರಿತಮ್‌ನ OpenSSH ಬೆಂಬಲ

Red Hat Enterprise Linux 6.5 ನಲ್ಲಿ, ಒಂದು ಹ್ಯಾಶ್ ಸಂದೇಶ ದೃಢೀಕರಣ ಸಂಕೇತ (MAC) ಅನ್ನು ಉತ್ಪಾದಿಸಲು ಈಗ SHA-2 ಕ್ರಿಪ್ಟೊಗ್ರಾಫಿಕ್ ಹ್ಯಾಶ್ ಸೌಲಭ್ಯವನ್ನು ಬಳಸಬಹುದಾಗಿರುತ್ತದೆ, ಇದು OpenSSH ನಲ್ಲಿ ದತ್ತಾಂಶ ಸಮಗ್ರತೆ ಮತ್ತು ಪರಿಶೀಲನೆಯನ್ನು ಸಕ್ರಿಯಗೊಳಿಸುತ್ತದೆ.

OpenSSL ನಲ್ಲಿ ಮ್ಯಾಕ್ರೊ ಪ್ರಿಫಿಕ್ಸ್

openssl ಸ್ಪೆಕ್‌ ಕಡತವು ಈಗ ಪ್ರಿಫಿಕ್ಸ್ ಮ್ಯಾಕ್ರೊವನ್ನು ಬಳಸುತ್ತದೆ, ಇದು openssl ಪ್ಯಾಕೇಜುಗಳನ್ನು ಸ್ಥಳಾಂತರಿಸಲು ಅವುಗಳನ್ನು ಮರುನಿರ್ಮಾಣ ಮಾಡುವುದಕ್ಕೆ ನೆರವಾಗುತ್ತದೆ.

NSA ಸೂಟ್ B ಕ್ರಿಪ್ಟೋಗ್ರಫಿ ಬೆಂಬಲ

ಸೂಟ್ B ಎನ್ನುವುದು NSA ಯ ಕ್ರಿಪ್ಟೋಗ್ರಾಫಿಕ್ ಮಾಡರ್ನೈಸೇಶನ್ ಪ್ರೊಗ್ರಾಮ್‌ನ ಒಂದು ಭಾಗವಾಗಿ ಸೂಚಿಸಲಾದ ಕ್ರಿಪ್ಟೋಗ್ರಾಫಿ ಅಲ್ಗಾರಿತಮ್‌ಗಳಾಗಿವೆ. ಇದು ರಹಸ್ಯವಲ್ಲದ ಮಾಹಿತಿ ಮತ್ತು ಅತ್ಯಂತ ರಹಸ್ಯವಾದ ಮಾಹಿತಿ ಎರಡಕ್ಕೂ ಸಹ ಒಂದು ಇಂಟರ್ಆಪರೇಬಲ್ ಕ್ರಿಪ್ಟೋಗ್ರಾಫಿಕ್ ಆಧಾರವನ್ನು ಒದಗಿಸುತ್ತದೆ. ಅವುಗಳೆಂದರೆ:
 • 128 ಮತ್ತು 256 ಬಿಟ್‌ಗಳ ಕೀಲಿ ಗಾತ್ರಗಳನ್ನು ಹೊಂದಿರುವ ಅಡ್ವಾನ್ಸಡ್ ಎನ್ಕ್ರಿಪ್ಶನ್ ಸ್ಟ್ಯಾಂಡರ್ಡ್ (AES). ಸಂಚಾರದ ಹರಿವಿಗಾಗಿ, AES ಅನ್ನು ಕಡಿಮೆ ಬ್ಯಾಂಡ್‌ವಿಡ್ತಿನ ಸಂಚಾರಕ್ಕಾಗಿ ಕೌಂಟರ್ ಮೋಡ್‌ನೊಂದಿಗೆ (CTR) ಅಥವ ಹೆಚ್ಚಿನ ಬ್ಯಾಂಡ್‌ವಿಡ್ತಿನ ಸಂಚಾರಕ್ಕೆ ಮತ್ತು ಗೂಢಲಿಪೀಕರಣಕ್ಕೆ ಗೆಲಿಯೋಸ್/ಕೌಂಟರ್ ಮೋಡ್‌ನೊಂದಿಗೆ (GCM) ಬಳಸಬೇಕಾಗುತ್ತದೆ.
 • ಎಲಿಕಪ್ಟಲ್ ಕರ್ವ್ ಡಿಜಿಟಲ್ ಸಿಗ್ನೇಚರ್ ಅಲ್ಗಾರಿತಮ್ (ECDSA) ಡಿಜಿಟಲ್ ಸಹಿಗಳು
 • ಎಲಿಪ್ಟಿಕ್ ಕರ್ವ್ ಡಿಫಿ-ಹೆಲ್ಮಾನ್ (ECDH) ಕೀಲಿ ಒಪ್ಪಂದ.
 • ಸೆಕ್ಯೂರ್ ಹ್ಯಾಶ್ ಅಲ್ಗಾರಿತಮ್ 2 (SHA-256 ಮತ್ತು SHA-384) ಸಂದೇಶದ ಡೈಜೆಸ್ಟ್.

ಹಂಚಲಾದ ವ್ಯವಸ್ಥೆಯ ಪ್ರಮಾಣಪತ್ರಗಳು

NSS, GnuTLS, OpenSSL ಮತ್ತು Java ಅನ್ನು ವ್ಯವಸ್ಥೆಯ ಪ್ರಮಾಣಪತ್ರ ಲಂಗರುಗಳಿಗಾಗಿ ಪೂರ್ವನಿಯೋಜಿತ ಆಕರವನ್ನು ಹಂಚಿಕೊಳ್ಳುವಂತೆ ಮತ್ತು ಪ್ರಮಾಣಪತ್ರ ನಂಬಿಕೆಯ ನಿರ್ಧಾರಗಳಿಗಾಗಿ ಕ್ರಿಪ್ಟೊ ಟೂಲ್‌ಕಿಟ್‌ಗಳಿಂದ ಇನ್‌ಪುಟ್ ಆಗಿ ಬಳಸಲಾಗುವ ಸ್ಥಿರ ದತ್ತಾಂಶದ ವ್ಯವಸ್ಥೆಯಾದ್ಯಂತದ ನಂಬಿಕೆ ಶೇಖರಣೆಯನ್ನು ಸಕ್ರಿಯಗೊಳಿಸಲು ಮಾಹಿತಿಯನ್ನು ಬ್ಲಾಕ್‌ಲಿಸ್ಟ್ ಮಾಡಲು ಪಟ್ಟಿ ಮಾಡಲಾಗಿದೆ. ಪ್ರಮಾಣಪತ್ರದ ವ್ಯವಸ್ಥೆ-ಮಟ್ಟದ ನಿರ್ವಹಣೆಯು ಬಳಕೆಯನ್ನು ಸುಲಭವಾಗಿಸುತ್ತದೆ ಮತ್ತು ಇದು ಸ್ಥಳೀಯ ವ್ಯವಸ್ಥೆಯ ಪರಿಸರಗಳಲ್ಲಿ ಮತ್ತು ಕಾರ್ಪೊರೇಟ್ ನಿಯೋಜನೆಗಳಲ್ಲಿ ಅಗತ್ಯವಾಗಿರುತ್ತದೆ.

ಅಟೊಮ್ಯಾಟಿಕ್ ಸಿಂಕ್ರೋನೈಸೇಶನ್ ಆಫ್ ಲೋಕಲ್ ಯೂಸರ್ಸ್ ಸೆಂಟ್ರಲಿ ಇನ್ ಐಡೆಂಟಿಟಿ ಮ್ಯಾನೇಜ್ಮೆಂಟ್‌

Red Hat Enterprise Linux 6.5 ನಲ್ಲಿ ಅಟೊಮ್ಯಾಟಿಕ್ ಸಿಂಕ್ರೋನೈಸೇಶನ್ ಆಫ್ ಲೋಕಲ್ ಯೂಸರ್ಸ್ ಸೆಂಟ್ರಲಿ ಇನ್ ಐಡೆಂಟಿಟಿ ಮ್ಯಾನೇಜ್ಮೆಂಟ್‌ನಿಂದಾಗಿ ಸ್ಥಳೀಯ ಬಳಕೆದಾರರನ್ನು ಕೇಂದ್ರೀಕೃತವಾದ ವ್ಯವಸ್ಥೆಯಲ್ಲಿ ಸುಲಭವಾಗಿ ವ್ಯವಸ್ಥಾಪಿಸಲು ಸಾಧ್ಯವಿರುತ್ತದೆ.

NSS ನಲ್ಲಿ ECC ಬೆಂಬಲ

Red Hat Enterprise Linux 6.5 ನಲ್ಲಿನ ನೆಟ್‌ವರ್ಕ್ ಸೆಕ್ಯುರಿಟಿ ಸರ್ವಿಸಸ್ (NSS) ಅನ್ನು ಈಗ ಎಲಿಪ್ಟಿಕಲ್ ಕರ್ವ್ ಕ್ರಿಪ್ಟೊಗ್ರಾಫಿಯನ್ನು (ECC) ಬೆಂಬಲಿಸುತ್ತದೆ.

ಅಧ್ಯಾಯ 4. ಚಂದಾದಾರಿಕೆ ವ್ಯವಸ್ಥಾಪನೆ

Red Hat ಸಪೋರ್ಟ್ ಟೂಲ್

Red Hat Enterprise Linux 6.5 ರಲ್ಲಿ redhat-support-tool ಪ್ಯಾಕೇಜನ್ನು ಸೇರಿಸಲಾಗಿದೆ, ಇದು Red Hat ಸಪೋರ್ಟ್ ಟೂಲ್‌ಗೆ ಬೆಂಬಲವನ್ನು ಸೇರಿಸುತ್ತದೆ. ಈ ಉಪಕರಣವು Red Hat ನ ಚಂದಾದಾರ ಸೇವೆಗಳಿಗೆ ಕನ್ಸೋಲ್ ಆಧರಿತವಾದ ನಿಲುಕನ್ನು ಅನುಕೂಲವಾಗಿಸುತ್ತದೆ ಮತ್ತು Red Hat ಗ್ರಾಹಕರಾಗಿರುವ ಚಂದಾದಾರರಿಗೆ ಲಭ್ಯವಿರುವ ಕಂಟೆಂಟ್ ಮತ್ತು ಸೇವೆಗಳನ್ನು ನಿಲುಕಿಸಿಕೊಳ್ಳಲು Red Hat ಚಂದಾದಾರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೆ, ನಮ್ಮ ಗ್ರಾಹಕರು ತಮ್ಮ ಹೆಲ್ಪ್‌ಡೆಸ್ಕ್ ಸೇವೆಗಲನ್ನು ನಮ್ಮ ಚಂದಾದಾರಿಕೆ ಸೇವೆಗಳೊಂದಿಗೆ ಸಂಘಟಿಸಲು ಮತ್ತು ಸ್ವಯಂಚಾಲಿತಗೊಳಿಸಲು ನೆರವಾಗುತ್ತದೆ. ಈ ಪ್ಯಾಕೇಜಿನ ಸಾಮರ್ಥ್ಯಗಳೆಂದರೆ:
 • ನಾಲೆಜ್ ಬೇಸ್ ಲೇಖನ ಮತ್ತು ಪರಿಹಾರವನ್ನು ಕನ್ಸೋಲ್‌ ಮುಖಾಂತರ ನೋಡುವಿಕೆ (ಮಾಹಿತಿ ಪುಟವಾಗಿ ವಿನ್ಯಾಸಗೊಳಿಸಲಾಗಿರುತ್ತದೆ).
 • ಕನ್ಸೋಲ್‌ನಿಂದ ಗ್ರಾಹಕರ ಪ್ರಕರಣಗಳನ್ನು ನೋಡಲು, ರಚಿಸಲು, ಮಾರ್ಪಡಿಸಲು, ಮತ್ತು ಅಭಿಪ್ರಾಯ ನೀಡುವ ಅವಕಾಶ.
 • ಕನ್ಸೋಲ್‌ನಿಂದ ಗ್ರಾಹಕ ಪ್ರಕರಣಗಳಿಗೆ ಅಥವ ftp://dropbox.redhat.com/ ನೇರವಾಗಿ ಲಗತ್ತನ್ನು ಅಪ್‌ಲೋಡ್ ಮಾಡುವ ಅವಕಾಶ.
 • ಸಂಪೂರ್ಣ ಪ್ರಾಕ್ಸಿ ಬೆಂಬಲ (ಅಂದರೆ, FTP ಮತ್ತು HTTP ಪ್ರಾಕ್ಸಿಗಳು).
 • ಕನ್ಸೋಲ್‌ನಿಂದ ಗ್ರಾಹಕರ ಪ್ರಕರಣಗಳನ್ನು ಸುಲಭವಾಗಿ ಪಟ್ಟಿ ಮಾಡಲು ಮತ್ತು ಇಳಿಸಿಕೊಳ್ಳುವ ಅವಕಾಶ.
 • ಸಂದೇಹದ ಪದಗಳಿಗಾಗಿ, ಲಾಗ್ ಸಂದೇಶಗಳಿಗಾಗಿ, ಹಾಗು ಇತರೆ ನಿಯತಾಂಕಗಳಿಗಾಗಿ ನಾಲೆಜ್ ಬೇಸ್ ಹುಡುಕಾಡಲು ಮತ್ತು ಒಂದು ಆಯ್ಕೆ ಮಾಡಬಹುದಾದ ಪಟ್ಟಿಯಲ್ಲಿ ಫಲಿತಾಂಶಗಳನ್ನು ನೋಡಲು ಅವಕಾಶ.
 • ಲಾಗ್ ಕಡತಗಳನ್ನು, ಪಠ್ಯ ಕಡತಗಳನ್ನು, ಮತ್ತು ಇತರೆ ಸಂಪನ್ಮೂಲಗಳನ್ನು ದೋಷ ಪತ್ತೆಗಾಗಿ ಶಾಡೋಮ್ಯಾನ್ ಸ್ವಯಂಚಾಲಿತ ತೊಂದರೆ ನಿರ್ಧರಿಸುವ ಎಂಜಿನ್‌ಗೆ ಸುಲಭವಾಗಿ ಅಪ್‌ಲೋಡ್ ಮಾಡಲು ಅವಕಾಶ.‌
 • ಇತರೆ ಹಲವಾರು ಬೆಂಬಲ-ಸಂಬಂಧಿ ಆದೇಶಗಳು.
Red Hat ಸಪೋರ್ಟ್ ಟೂಲ್‌ ಕುರಿತು ಹೆಚ್ಚಿನ ಮಾಹಿತಿಗಾಗಿ, /usr/share/doc/redhat-support-tool-version/ ಕೋಶದಲ್ಲಿ ಅನುಸ್ಥಾಪಿಸಲಾದ ದಸ್ತಾವೇಜನ್ನು ಅಥವ ಈ ನಾಲೆಜ್‌ ಬೇಸ್ ಲೇಖನವನ್ನು ನೋಡಿ: https://access.redhat.com/site/articles/445443.

subscription-manager list ನ ಅಪ್‌ಡೇಟ್‌ಗಳು

ಲಭ್ಯವಿರುವ ಚಂದಾದಾರಿಕೆಗಳಲ್ಲಿ, subscription-manager list --available ಆದೇಶದ ಔಟ್‌ಪುಟ್ ಈಗ Provides ಎಂಬ ಒಂದು ಹೊಸ ಸ್ಥಳವನ್ನು ಹೊಂದಿರುತ್ತದೆ. ಈ ಸ್ಥಳವು ವ್ಯವಸ್ಥೆಯು ಅರ್ಹವಾಗಿರುವ ಉತ್ಪನ್ನಗಳ ಹೆಸರುಗಳನ್ನು ತೋರಿಸುತ್ತದೆ. ಇದರ ಜೊತೆಗೆ, ಅನುಸರಣೆಯನ್ನು ಸುಲಭವಾಗಿಸಲು ಮತ್ತು ಗ್ರಾಫಿಕಲ್ ಯೂಸರ್ ಇಂಟರ್ಫೇಸ್‌ನೊಂದಿಗೆ (GUI) ಸಾಮ್ಯತೆಯನ್ನು ಒದಗಿಸಲು, Suggested, ಎನ್ನುವ ಸ್ಥಳವನ್ನೂ ಸಹ ಸೇರಿಸಲಾಗಿದೆ.

ಅಧ್ಯಾಯ 5. ವರ್ಚುವಲೈಸೇಶನ್

Red Hat Enterprise Linux 6.5 ರ ವರ್ಚುವಲೈಸೇಶನ್ ಅಪ್‌ಡೇಟ್‌ನಿಂದಾಗಿ ಲೈವ್ ವರ್ಗಾವಣೆ, ದೋಷ ವರದಿ ಮಾಡುವಿಕೆ, ಯಂತ್ರಾಂಶ ಮತ್ತು ತಂತ್ರಾಂಶ ಹೊಂದಾಣಿಕೆಗೆ ಸಂಬಂಧಿಸಿದ ಹಲವಾರು ದೋಷಗಳು ಇಲ್ಲವಾಗಿವೆ. ಇದರ ಜೊತೆಗೆ, ಕಾರ್ಯನಿರ್ವಹಣೆ ಮತ್ತು ಸಾಮಾನ್ಯ ಸ್ಥಿರತೆಯ ಸುಧಾರಣೆಯನ್ನು ಅಳವಡಿಸಲಾಗಿದೆ. ಈ ಬದಲಾವಣೆಗಳಲ್ಲಿನ ಪ್ರಮುಖವಾದವುಗಳಿಗಾಗಿ, ಈ ಕೆಳಗಿನ ವಿಭಾಗಗಳನ್ನು ನೋಡಿ.

5.1. KVM

VMDK ಚಿತ್ರಿಕಾ ಕಡತ ವಿನ್ಯಾಸಕ್ಕಾಗಿ ಸುಧಾರಿತ ಬೆಂಬಲ

Red Hat Enterprise Linux 6.5 ರಲ್ಲಿ ವರ್ಚುವಲ್ ಮೆಶೀನ್ ಡಿಸ್ಕ್, ಅಥವ VMDK, ಹಲವಾರು VMware ಉತ್ಪನ್ನಗಳಿಂದ ರಚಿಸಲಾಗಿರುವ ಚಿತ್ರಿಕಾ ಕಡತ ವಿನ್ಯಾಸಗಳು, ಅದರ ಉಪವಿನ್ಯಾಸಗಳಿಗೆ ಓದಲು-ಮಾತ್ರವಾದ ಬೆಂಬಲಕ್ಕಾಗಿನ ಹಲವು ಸುಧಾರಣೆಗಳನ್ನು ಸೇರಿಸಲಾಗಿದೆ.

Windows ಅತಿಥಿ ಮಧ್ಯವರ್ತಿ ಸಂಪೂರ್ಣವಾಗಿ ಬೆಂಬಲಿತವಾಗಿದೆ

Windows ಅತಿಥಿ ಮಧ್ಯವರ್ತಿಯು ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ ಮತ್ತು ಅದನ್ನು virtio-win ಚಾಲಕಗಳೊಂದಿಗೆ ಪೂರಕ ಚಾನಲ್‌ನಲ್ಲಿ ತನ್ನದೆ ಆದ ಅನುಸ್ಥಾಪಕದೊಂದಿಗೆ ಒದಗಿಸಲಾಗುತ್ತದೆ.

VHDX ಚಿತ್ರಿಕಾ ಕಡತ ವಿನ್ಯಾಸಕ್ಕಾಗಿ ಬೆಂಬಲ

Red Hat Enterprise Linux 6.5 ರಲ್ಲಿ Microsoft Hyper-V ಇಂದ ರಚಿಸಲಾದ Hyper-V ವರ್ಚುವಲ್ ಹಾರ್ಡ್ ಡಿಸ್ಕ್, ಅಥವ VHDX, ಚಿತ್ರಿಕಾ ವಿನ್ಯಾಸಗಳಿಗೆ ಓದಲು-ಮಾತ್ರವಾದ ಬೆಂಬಲವನ್ನು ಸೇರಿಸಲಾಗಿದೆ.

QEMU ನಲ್ಲಿ GlusterFS ಗಾಗಿ ಸ್ಥಳೀಯ ಬೆಂಬಲ

QEMU ನಲ್ಲಿನ GlusterFS ಗಾಗಿ ಸ್ಥಳೀಯ ಬೆಂಬಲವು (ನೇಟೀವ್ ಸಪೋರ್ಟ್) GlusterFS ಪರಿಮಾಣವನ್ನು ಸ್ಥಳೀಯವಾಗಿ ಏರಿಸಲಾದ (ಮೌಂಟ್) FUSE ಕಡತ ವ್ಯವಸ್ಥೆಯ ಬದಲಿಗೆ libgfapi ಲೈಬ್ರರಿಯನ್ನು ಬಳಸಿಕೊಂಡು ನಿಲುಕಿಸಿಕೊಳ್ಳುವುದನ್ನು ಅನುಮತಿಸುತ್ತದೆ. ಈ ಸ್ಥಳೀಯ ಮಾರ್ಗವು ಗಮನಾರ್ಹವಾದ ಕಾರ್ಯನಿರ್ವಹಣಾ ಸುಧಾರಣೆಗಳನ್ನು ಒದಗಿಸುತ್ತದೆ.

ಲೈವ್ ವರ್ಚುವಲ್ ಮೆಶೀನ್‌ಗಳ ಬಾಹ್ಯ ಬ್ಯಾಕ್ಅಪ್‌ಗಾಗಿ ಬೆಂಬಲ

ಆತಿಥೇಯದಲ್ಲಿ ಚಲಾಯಿತಗೊಳ್ಳುತ್ತಿರುವ ತರ್ಡ್-ಪಾರ್ಟಿ ಅನ್ವಯಗಳು ಈಗ ಅತಿಥಿ ಚಿತ್ರಿಕೆಯಲ್ಲಿನ ವಿಷಯಗಳನ್ನು ಓದಲು-ಮಾತ್ರವಾದ ರೂಪದಲ್ಲಿ ನಿಲುಕಿಸಿಕೊಳ್ಳಲು ಸಾಧ್ಯವಿರುತ್ತದೆ, ಆ ಮೂಲಕ ಕಡತಗಳನ್ನು ಪ್ರತಿ ಮಾಡಲು ಮತ್ತು ಬ್ಯಾಕ್ಅಪ್‌ಗಳನ್ನು ನಿರ್ವಹಿಸಲು ಸಾಧ್ಯವಿರುತ್ತದೆ.

Linux ಅತಿಥಿಗಳಿಗಾಗಿ CPU ಹಾಟ್‌ ಪ್ಲಗ್ಗಿಂಗ್

Linux ಅತಿಥಿಗಳಲ್ಲಿನ QEMU ಅತಿಥಿ ಮಧ್ಯವರ್ತಿಯ ನೆರವಿನಿಂದ CPU ಹಾಟ್‌ ಪ್ಲಗ್ಗಿಂಗ್ ಮತ್ತು ಹಾಟ್ ಅನ್‌ಪ್ಲಗ್ಗಿಂಗ್ ಅನ್ನು ಬೆಂಬಲಿಸಲಾಗುತ್ತದೆ; ಅತಿಥಿಯು ಚಾಲನೆಯಲ್ಲಿದ್ದಾಗ CPUಗಳನ್ನು ಸಕ್ರಿಯಗೊಳಿಸಲು ಅಥವ ನಿಷ್ಕ್ರಿಯಗೊಳಿಸಲು ಸಾಧ್ಯವಿರುತ್ತದೆ, ಆ ಮೂಲಕ ಇದು ಹಾಟ್‌ ಪ್ಲಗ್ಗಿಂಗ್ ಮತ್ತು ಹಾಟ್ ಅನ್‌ಪ್ಲಗ್ಗಿಂಗ್‌ನಂತೆ ವರ್ತಿಸುತ್ತದೆ.

Microsoft Windows ನಲ್ಲಿ qemu-ga-win VSS ಬೆಂಬಲದೊಂದಿಗೆ ಅನ್ವಯದ-ಅರಿವಿನ freeze ಮತ್ತು thaw>

VSS (ವಾಲ್ಯೂಮ್ ಶಾಡೊ ಕಾಪಿ ಸರ್ವಿಸ್) ಎನ್ನುವುದು Microsoft Windows API ಆಗಿದ್ದು, ಇದು ಬೇರೆಯವುಗಳ ಜೊತೆಗೆ, ಸೂಕ್ತವಾದ ಸ್ಥಿರವಾದ freeze ಮತ್ತು thaw ಕಾರ್ಯಾಚರಣೆಗಳಿಗಾಗಿನ ಅನ್ವಯಗಳ ಸೂಚನೆಯನ್ನು ನೀಡುವುದನ್ನು ಅನುಮತಿಸುತ್ತದೆ. ಈ ಸೌಲಭ್ಯದಿಂದಾಗಿ, ವರ್ಚುವಲ್ ಗಣಕವು ಚಾಲನೆಯಲ್ಲಿದ್ದಾಗ ತೆಗೆದುಕೊಳ್ಳಲಾದ ಸ್ನ್ಯಾಪ್‌ಶಾಟ್‌ಗಳು ಸಂಪೂರ್ಣ ಸ್ಟಾಕ್‌ನಲ್ಲಿ (ಬ್ಲಾಕ್ ಪದರದಿಂದ ಅತಿಥಿ ಅನ್ವಯಕ್ಕೆ ) ಸ್ಥಿರವಾಗಿರುತ್ತದೆ ಮತ್ತು ಬ್ಯಾಕ್ಅಪ್ ಉದ್ಧೇಶಗಳಿಗಾಗಿ ಬಳಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, Virtualization Administration Guide ಅನ್ನು ನೋಡಿ

Linux ನಲ್ಲಿ qemu-ga ಹುಕ್‌ಗಳನ್ನು ಬಳಸಿಕೊಂಡು ಅನ್ವಯದ-ಅರಿವಿನ freeze ಮತ್ತು thaw

Windows VSS ಆವೃತ್ತಿಯಂತೆ, ಅತಿಥಿಯಲ್ಲಿ ಚಾಲನೆಯಲ್ಲಿರುವ QEMU ಅತಿಥಿ ಮಧ್ಯವರ್ತಿಗೆ ಲಗತ್ತಿಸಲಾಗಿರುವ ಸ್ಕ್ರಿಪ್ಟುಗಳನ್ನು ಬಳಸಿಕೊಂಡು ಅನ್ವಯ-ಸ್ಥಿರವಾದ ಸ್ನ್ಯಾಪ್‌ಶಾಟ್‌ಗಳನ್ನು ರಚಿಸಲು ಸಾಧ್ಯವಿರುತ್ತದೆ. ಈ ಸ್ಕ್ರಿಪ್ಟುಗಳು freeze ಅಥವ thaw ಕಾರ್ಯಾಚರಣೆಯ ಸಮಯದಲ್ಲಿ ತಮ್ಮ ದತ್ತಾಂಶವನ್ನು ಡಿಸ್ಕಿಗೆ ಹೊರತಳ್ಳುವ ಅನ್ವಯಗಳ ಕುರಿತು ಸೂಚನೆಗಳನ್ನು ನೀಡಬಲ್ಲದು, ಇದು ಸ್ಥಿರವಾದ ಸ್ನ್ಯಾಪ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಕಾರಣವಾಗುತ್ತದೆ.

VMware OVF ಮತ್ತು Citrix Xen ಅತಿಥಿಗಳನ್ನು KVM ಅತಿಥಿಗಳಾಗಿ ಪರಿವರ್ತಿಸುವಿಕೆ

VMware Open Virtualization Format (OVF) ಮತ್ತು Citrix Xen ಅತಿಥಿಗಳನ್ನು KVM ಅತಿಥಿಗಳಾಗಿ ಪರಿವರ್ತಿಸುವಿಕೆಯನ್ನು ಬೆಂಬಲಿಸುವಂತೆ virt-v2v ಪರಿವರ್ತನೆಯ ಉಪಕರಣವನ್ನು ಅಪ್‌ಸ್ಟ್ರೀಮ್ ಆವೃತ್ತಿಗೆ ನವೀಕರಿಸಲಾಗಿದೆ.

KVM ಮೆಮೊರಿ ಸ್ಕೇಲೆಬಿಲಿಟಿಯಲ್ಲಿ ಹೆಚ್ಚಳ

ಒಂದು ಏಕ ಅತಿಥಿಯಲ್ಲಿ KVM ವರ್ಚುವಲ್ ಮೆಮೊರಿ ಸ್ಕೇಲೆಬಿಲಿಟಿಯನ್ನು 4TB ಗೆ ಹೆಚ್ಚಿಸಲಾಗಿದೆ.

Microsoft Windows ಅತಿಥಿಗಳ ಒಳಗೆ ಧ್ವನಿ ಪ್ರಮಾಣಕ್ಕೆ ಬೆಂಬಲ

ಬಳಕೆದಾರರು ಈಗ Microsoft Windows XP ನಲ್ಲಿ AC'97 ಕೋಡೆಕ್ ಅನ್ನು ಬಳಸಿಕೊಂಡು ಧ್ವನಿ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿರುತ್ತದೆ.

5.2. Microsoft Hyper-V

Microsoft Hyper-V ಪ್ಯಾರಾ-ವರ್ಚುವಲೈಸ್ಡ್ ಚಾಲಕಗಳು

Microsoft Hyper-V ನಲ್ಲಿನ Red Hat Enterprise Linux ಬೆಂಬಲವನ್ನು ಉತ್ತಮಗೊಳಿಸಲು, ಸಿಂತೆಟಿಕ್ ವೀಡಿಯೊ ಫ್ರೇಮ್ ಬಫರ್ ಡ್ರೈವರ್ ಅನ್ನು Red Hat Enterprise Linux 6.5 ಗೆ ಸೇರಿಸಲಾಗಿದೆ. ಇದರ ಜೊತೆಗೆ, ಆತಿಥೇಯ ಮತ್ತು ಅತಿಥಿಯ ನಡುವಿನ ಸಿಗ್ನಲಿಂಗ್ ಪ್ರೊಟೊಕಾಲ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ, Virtualization Administration Guide ಅನ್ನು ನೋಡಿ

5.3. VMware

VMware ಪ್ಲಾಟ್‌ಫಾರ್ಮ್ ಚಾಲಕಗಳ ಅಪ್‌ಡೇಟ್‌ಗಳು

VMware ಜಾಲಬಂಧ ಪ್ಯಾರಾ-ವರ್ಚುವಲೈಸೇಶನ್ ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 6. ಶೇಖರಣೆ

fsfreezeನ ಸಂಪೂರ್ಣ ಬೆಂಬಲ

fsfreeze ಉಪಕರಣವು ಈಗ Red Hat Enterprise Linux 6.5 ನಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿದೆ.fsfreeze ಆದೇಶವು ಒಂದು ಡಿಸ್ಕಿನಲ್ಲಿ ಕಡತ ವ್ಯವಸ್ಥೆಯ ನಿಲುಕನ್ನು ಸ್ಥಗಿತಗೊಳಿಸುತ್ತದೆ. fsfreeze ಅನ್ನು ಪರಿಮಾಣದ ಸ್ನ್ಯಾಪ್‌ಶಾಟ್‌ಗಳ ರಚನೆಯಲ್ಲಿ ನೆರವಾಗಲು ಸಹಾಯವಾಗುವಂತೆ, ಒಂದು ಯಂತ್ರಾಂಶ RAID ಸಾಧನಗಳಲ್ಲಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. fsfreeze ಸವಲತ್ತಿನ ಕುರಿತವಾದ ಹೆಚ್ಚಿನ ವಿವರಗಳಿಗಾಗಿ, fsfreeze(8) ಮಾಹಿತಿ ಪುಟವನ್ನು ನೋಡಿ.

pNFS ಕಡತ ಲೇಔಟ್ ದೃಢಗೊಳಿಕೆ (ಹಾರ್ಡನಿಂಗ್)

ಭೌತಿಕ ಶೇಖರಣಾ ಸಾಧನದಿಂದ ಮತ್ತು ಭೌತಿಕ ಶೇಖರಣಾ ಸಾಧನಕ್ಕೆ ಕಂಪ್ಯೂಟ್ ಕ್ಲೈಂಟ್‌ಗಳು ದತ್ತಾಂಶವನ್ನು ನೇರವಾಗಿ ಮತ್ತು ಸಮಾನಾಂತರವಾಗಿ ಓದಲು ಮತ್ತು ಬರೆಯಲು ಅನುಮತಿಸುವ ಮೂಲಕ, ಸಾಂಪ್ರದಾಯಿಕ NAS ಪರಿಸರಗಳಲ್ಲಿ ಗಾತ್ರ ಹೆಚ್ಚಿಸಲು ಸಾಂಪ್ರದಾಯಿಕ NFS ವ್ಯವಸ್ಥೆಗಳು pNFS ಅನ್ನು ಬಳಸುತ್ತವೆ. ಹಲವಾರು ಕ್ಲೈಂಟ್‌ಗಳಿಂದ ದೊಡ್ಡ ಪ್ರಮಾಣದ ಸೆಟ್‌ಗಳಿಗೆ ಊಹಿಸಬಹುದಾದ ರೀತಿಯ ಸ್ಕೇಲೆಬಲ್ ನಿಲುಕನ್ನು ಅನುಮತಿಸುವ ಮೂಲಕ, NFS ಪೂರೈಕೆಗಣಕವನ್ನು ಕೇವಲ ಮೆಟಾಡೇಟ್ ಮತ್ತು ನಿರ್ದೇಶಾಂಕ ನಿಲುಕನ್ನು ನಿಯಂತ್ರಿಸಲು ಮಾತ್ರ ಬಳಸಲಾಗುತ್ತದೆ. pNFS ನಲ್ಲಿನ ದೋಷ ಸರಿಪಡಿಕೆಗಳನ್ನು ಈ ಬಿಡುಗಡೆಯಲ್ಲಿ ನೀಡಲಾಗುತ್ತಿದೆ.

FUSE ನಲ್ಲಿ Red Hat ಸ್ಟೋರೇಜ್ ಬೆಂಬಲ

FUSE (ಫೈಲ್‌ಸಿಸ್ಟಮ್ ಇನ್ ಯೂಸರ್ ಸ್ಪೇಸ್) ಎನ್ನುವುದು ಕರ್ನಲ್‌ಗೆ ಯಾವುದೆ ಬದಲಾವಣೆಗಳನ್ನು ಮಾಡಲದೆ ಕೇವಲ ಬಳಕೆದಾರ ಸ್ಥಳದಲ್ಲಿ ಮಾತ್ರ ಕಡತ ವ್ಯವಸ್ಥೆಗಳ ವಿಕಸನೆಯನ್ನು ಸಕ್ರಿಯಗೊಳಿಸುವ ಒಂದು ಫ್ರೇಮ್‌ವರ್ಕ್ ಆಗಿದೆ. Red Hat Enterprise Linux 6.5 FUSE ಅನ್ನು ಬಳಸುವ ಬಳಕೆದಾರ ಸ್ಥಳದ ಕಡತ ವ್ಯವಸ್ಥೆಗಳಿಗಾಗಿ ಕಾರ್ಯನಿರ್ವಹಣೆ ಸುಧಾರಣೆಗಳನ್ನು ಒದಗಿಸುತ್ತದೆ, ಉದಾಹರಣೆಗೆ, GlusterFS (Red Hat Storage).

LVM ತಿನ್ ಪ್ರಾವಿಶನಿಂಗ್ ಮತ್ತು ಸ್ನ್ಯಾಪ್‌ಶಾಟ್‌ಗಳು

ತಿನ್ ಪ್ರಾವಿಶನಿಂಗ್ ಅನ್ನು ಸೇರಿಸುವಂತೆ ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ಅನ್ನು ಅಪ್‌ಡೇಟ್ ಮಾಡಲಾಗಿದೆ, ಇದು ಬಳಕೆದಾರರಿಗೆ ತಮ್ಮ ನಿಜವಾದ ಶೇಖರಣೆಯ ಬಳಕೆಯ ಅಗತ್ಯಗಳನ್ನು ಅವರ ಸಾಮರ್ಥ್ಯಕ್ಕೆ ಹೊಂದಿಕೆ ಮಾಡುವ ಮೂಲಕ ತಮ್ಮ ಶೇಖರಣಾ ಸಾಮರ್ಥ್ಯದ ಹೂಡಿಕೆಯನ್ನು ಅನುಕೂಲಗೊಳಿಸಲು ಅನುವು ಮಾಡುತ್ತದೆ. ಬಳಕೆದಾರರು ಈಗ ಹಂಚಲಾದ ಶೇಖರಣಾ ಪೂಲ್‌ನಿಂದ ಈಗ ತಿನ್-ಪ್ರಾವಶನಿಂಗ್ ಮಾಡಲಾದ ಪರಿಮಾಣಗಳನ್ನು ರಚಿಸಲು ಸಾಧ್ಯವಿರುತ್ತದೆ. ಪರಿಮಾಣಳನ್ನು ಬರೆದಾಗ ಮಾತ್ರ ಪೂಲ್‌ನಲ್ಲಿಯ ಖಂಡಗಳನ್ನು ನಿಯೋಜಿಸಲಾಗುತ್ತದೆ, ಮತ್ತು ಪರಿಮಾಣದಲ್ಲಿನ ದತ್ತಾಂಶವನ್ನು ಅಳಿಸಿದಾಗ ಖಂಡಗಳನ್ನು ಪೂಲ್‌ಗೆ ಮರಳಿಸಲಾಗುತ್ತದೆ. ಇದರ ಜೊತೆಗೆ, ಸ್ನ್ಯಾಪ್‌ಶಾಟ್‌ಗಳು, ಅಥವ ಪಾಯಿಂಟ್-ಇನ್-ಟೈಮ್ ಪ್ರತಿಗಳು, ಒಂದು ಪರಿಮಾಣದಲ್ಲಿ ಹಿಂದಿನ ನಿರ್ದಿಷ್ಟ ಸಮಯದಲ್ಲಿ ಇದ್ದಿರಬಹುದಾದ ದತ್ತಾಂಶವನ್ನು ನಿಲುಕಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ದತ್ತಾಂಶದ ಮೇಲೆ ತಿದ್ದಿ-ಬರೆಯುವುದಕ್ಕೂ ಮೊದಲು ಅದನ್ನು ಸಂರಕ್ಷಿಸುವ ಮೂಲಕ ಇದನ್ನು ಮಾಡಲು ಸಾಧ್ಯವಾಗುತ್ತದೆ.

ಮಲ್ಟಿಪಾತ್ I/O ಅಪ್‌ಡೇಟ್‌ಗಳು

Device Mapper Multipath ನ ಸ್ಕೇಲೆಬಿಲಿಟಿ ಮತ್ತು ಬಳಕೆಯ-ಸುಲಭತೆಯನ್ನು ಸುಧಾರಿಸಲಾಗಿದೆ. ಈ ಸುಧಾರಣೆಗಳಲ್ಲಿ ಪ್ರಮುಖವಾದವುಗಳೆಂದರೆ:
 • ಸೌಲಭ್ಯಗಳ ಪ್ರತಿಕ್ರಿಯಾಶೀಲತೆ,
 • ಮಲ್ಟಿಪಾತ್ ಸಾಧನ ಸ್ವಯಂಚಾಲಿತ ಹೆಸರಿಸುವಿಕೆ,
 • ಹೆಚ್ಚು ಸದೃಢವಾದ ಮಲ್ಟಿಪಾತ್ ಗುರಿಯ ಪತ್ತೆಮಾಡುವಿಕೆ.

GFS2 ನಲ್ಲಿ ಸುಧಾರಿತ ಕಾರ್ಯನಿರ್ವಹಣೆ

Red Hat Enterprise Linux 6.5 Orlov block ನಿಯೋಜಕವನ್ನು ಪರಿಚಯಿಸುತ್ತದೆ, ಇದು ನಿಜವಾಗಿಯೂ ಸಹ ಪರಸ್ಪರ ಸಂಬಂಧಿಸಿದ ಮತ್ತು ಒಟ್ಟಿಗೆ ಬಳಸಬೇಕಿರುವ ಕಡತಗಳಿಗಾಗಿ ಉತ್ತಮವಾದ ಸ್ಥಳವನ್ನು ಒದಗಿಸುತ್ತದೆ. ಇದರ ಜೊತೆಗೆ, ಸಂಪನ್ಮೂಲ ಗುಂಪುಗಳು ಹೆಚ್ಚು ಸ್ಪರ್ಧಾತ್ಮಕವಾಗಿದ್ದರೆ, ಕಾರ್ಯನಿರ್ವಹಣೆಯನ್ನು ಗರಿಷ್ಟಗೊಳಿಸಲು ಒಂದು ಪ್ರತ್ಯೇಕವಾದ ಗುಂಪನ್ನು ಬಳಸಲಾಗುತ್ತದೆ.

mdadmನಲ್ಲಿ TRIM ಬೆಂಬಲ

mdadm ಉಪಕರಣವು ಈಗ RAID0, RAID1, RAID10 ಮತ್ತು RAID5ಗಾಗಿ TRIM ಅನ್ನು ಬೆಂಬಲಿಸುತ್ತದೆ.

ಅಧ್ಯಾಯ 7. ಕ್ಲಸ್ಟರಿಂಗ್

pcs ಸಂಪೂರ್ಣವಾಗಿ ಬೆಂಬಲಿತಗೊಂಡಿದೆ

pcs ಪ್ಯಾಕೇಜನ್ನು ಈ ಹಿಂದೆ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿತ್ತು, ಅದನ್ನು ಈಗ Red Hat Enterprise Linux 6.5 ನಲ್ಲಿ ಸಂಪೂರ್ಣ ಬೆಂಬಲಿಸಲಾಗುತ್ತದೆ. ಈ ಪ್ಯಾಕೇಜ್ corosync ಮತ್ತು pacemaker ಸೌಲಭ್ಯಗಳನ್ನು ನಿರ್ವಹಿಸಲು ಆದೇಶಸಾಲಿನ-ಉಪಕರಣವನ್ನು ಒದಗಿಸುತ್ತದೆ.

pacemaker ಸಂಪೂರ್ಣವಾಗಿ ಬೆಂಬಲಿತಗೊಂಡಿದೆ

Pacemaker, ಒಂದು ಸ್ಕೇಲೆಬಲ್ ಅತಿ-ಲಭ್ಯತೆಯ ಕ್ಲಸ್ಟರ್ ಸಂಪನ್ಮೂಲ ವ್ಯವಸ್ಥಾಪಕವಾಗಿದೆ. ಇದನ್ನು ಈ ಹಿಂದೆ ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿತ್ತು, ಈಗ ಇದು ಸಂಪೂರ್ಣವಾಗಿ ಬೆಂಬಲಿತವಾಗಿದೆ.

ಅಧ್ಯಾಯ 8. ಯಂತ್ರಾಂಶ ಸಕ್ರಿಯಗೊಳಿಕೆ

ಭವಿಷ್ಯದ Intel SOC ಸಂಸ್ಕಾರಕಗಳಿಗಾಗಿ ಬೆಂಬಲ

ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಭವಿಷ್ಯದ Intel System-on-Chip (SOC) ಸಂಸ್ಕಾರಕಗಳಿಗಾಗಿ ಸಾಧನ ಬೆಂಬಲವನ್ನು ಸಕ್ರಿಯಗೊಳಿಸಲಾಗಿದೆ. ಇವುಗಳೆಂದರೆ ಡ್ಯುವಲ್ ಆಟಮ್ ಸಂಸ್ಕಾರಕಗಳು, ಮೆಮೊರಿ ಕಂಟ್ರೋಲರ್, SATA, ಯುನಿವರ್ಸಲ್ ಅಸಿಂಕ್ರೋನಸ್ ರಿಸೀವರ್/ಟ್ರಾನ್ಸಮಿಟರ್, ಸಿಸ್ಟಮ್ ಮ್ಯಾನೇಜ್ಮೆಂಟ್ ಬಸ್ (SMBUS), USB ಮತ್ತು Intel ಲೆಗೆಸಿ ಬ್ಲಾಕ್ (ILB - lpc, ಟೈಮರುಗಳು, SMBUS (i2c_801 ಮಾಡ್ಯೂಲ್)).

12Gbps LSI SAS ಸಾಧನಗಳ ಬೆಂಬಲ

mpt3sas ಚಾಲಕವು LSI in Red Hat Enterprise Linux ನಲ್ಲಿ LSI ಇಂದ 12Gbps SAS ಸಾಧನಗಳಿಗಾಗಿ ಬೆಂಬಲವನ್ನು ಸೇರಿಸುತ್ತದೆ.

ಡೈನಮಿಕ್ ಹಾರ್ಡವೇರ್ ಪಾರ್ಟಿಶನಿಂಗ್ ಮತ್ತು ಸಿಸ್ಟಮ್ ಬೋರ್ಡ್ ಸ್ಲಾಟ್ ಗುರುತಿಸುವಿಕೆಗೆ ಬೆಂಬಲ

ಡೈನಮಿಕ್ ಹಾರ್ಡವೇರ್ ಪಾರ್ಟಿಶನಿಂಗ್ ಮತ್ತು ಸಿಸ್ಟಮ್ ಬೋರ್ಡ್ ಸ್ಲಾಟ್ ಗುರುತಿಸುವಿಕೆ .

ಭವಿಷ್ಯದ Intel 2D ಮತ್ತು 3D Graphics ಗಾಗಿ ಬೆಂಬಲ

ಭವಿಷ್ಯದ Intel ಸಂಸ್ಕಾರಗಳನ್ನು ಬಳಸುವ ವ್ಯವಸ್ಥೆಗಳಿಗೆ Red Hat ಯಂತ್ರಾಂಶ ಪ್ರಮಾಣಪತ್ರ ಕಾರ್ಯಕ್ರಮದ ಮುಖಾಂತರ ಪ್ರಮಾಣೀಕರಸಲು ಅನುವು ಮಾಡಿಕೊಡುವಂತೆ ಭವಿಷ್ಯದ Intel 2D ಮತ್ತು 3D ಗ್ರಾಫಿಕ್ಸಿಗಾಗಿ ಬೆಂಬಲವನ್ನು ಸೇರಿಸಲಾಗಿದೆ.

ಫ್ರಿಕ್ವೆನ್ಸಿ ಸಂವೇದಿ ಅಭಿಪ್ರಾಯ ಮೇಲ್ವಿಚಾರಕ

ಕಾರ್ಯಾಚರಣೆ ವ್ಯವಸ್ಥೆಯು ವಿದ್ಯುಚ್ಛಕ್ತಿ ಉಳಿಸುವಾಗ ಉತ್ತಮವಾದ ಫ್ರಿಕ್ವೆನ್ಸಿ ಬದಲಾವಣೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವಂತೆ ಫ್ರಿಕ್ವೆನ್ಸಿ ಸಂವೇದಿ ಅಭಿಪ್ರಾಯ ಮೇಲ್ವಿಚಾರಕವು ಅದಕ್ಕೆ ಸೂಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.

ECC ಮೆಮೊರಿ ಬೆಂಬಲ

ಎರರ್-ಕರೆಕ್ಟಿಂಗ್ ಕೋಡ್ (ECC) ಮೆಮೊರಿಯನ್ನು ಭವಿಷ್ಯದ ಪೀಳಿಗೆಯ AMD ಸಂಸ್ಕಾರಕಗಳಿಗಾಗಿ ಸಕ್ರಿಯಗೊಳಿಸಲಾಗಿದೆ. ಈ ಸೌಲಭ್ಯವು ECC ಮೆಮೊರಿಗೆ ಸಂಬಂಧಿಸಿದ ಕೌಂಟರುಗಳು ಮತ್ತು ಸ್ಥಿತಿಯ ತುಣುಕುಗಳನ್ನು ನಿಲುಕಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಣೆ ಮತ್ತು ದೋಷಗಳಿಗಾಗಿ ಪರಿಶೀಲಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.

1TB ಗಿಂತ ಹೆಚ್ಚಿನ ಮೆಮೊರಿಯನ್ನು ಹೊಂದಿರುವ AMD ವ್ಯವಸ್ಥೆಗಳಿಗೆ ಬೆಂಬಲ

ಕರ್ನಲ್ ಈಗ 1TB ಗೂ ಹೆಚ್ಚಿನ RAM ಅನ್ನು ಹೊಂದಿರುವ AMD ವ್ಯವಸ್ಥೆಗಳಲ್ಲಿ ಮೆಮೊರಿ ಸಂರಚನೆಗಳಿಗೆ ಬೆಂಬಲವನ್ನು ಸೇರಿಸುತ್ತದೆ.

ಅಧ್ಯಾಯ 9. ಇಂಡಂಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್

FIPS 140 ರಿವ್ಯಾಲಿಡೇಶನ್ಸ್

ಫೆಡರಲ್ ಇನ್‌ಫಾರ್ಮೇಶನ್ ಪ್ರೊಸೆಸಿಂಗ್ ಸ್ಟ್ಯಾಂಡರ್ಡ್ಸ್ (FIPS) ಪಬ್ಲಿಕೇಶನ್ಸ್ 140 ಎನ್ನುವುದು U.S. ಸರ್ಕಾರದ ಸುರಕ್ಷತೆಯ ಶಿಷ್ಟತೆಯಾಗಿದ್ದ, ಇದುು ಸೂಕ್ಷ್ಮಸಂವೇದಿ, ಆದರೆ ರಹಸ್ಯವರ್ಗವಾಗಿರದ ಮಾಹಿತಿಯನ್ನು ಸಂರಕ್ಷಿಸುವ ಸುರಕ್ಷತಾ ವ್ಯವಸ್ಥೆಯಲ್ಲಿ ಬಳಕೆ ಮಾಡಬೇಕಿರುವ ಸುರಕ್ಷತಾ ಅಗತ್ಯತೆಗಳನ್ನು ಸೂಚಿಸುತ್ತದೆ. ಈ ಶಿಷ್ಟತೆಯು ನಾಲ್ಕು ಏರಿಕೆ ಕ್ರಮದ, ಗುಣಾತ್ಮಕ ಮಟ್ಟಗಳ ಸುರಕ್ಷತಾ ಹಂತಗಳನ್ನು ಒದಗಿಸುತ್ತದೆ: ಹಂತ 1, ಹಂತ 2, ಹಂತ 3, ಮತ್ತು ಹಂತ 4. ಈ ಹಂತಗಳು ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ಗಳನ್ನು ಅಳವಡಿಸಲಾದ ಸಮರ್ಥ ಅನ್ವಯಗಳು ಮತ್ತು ಪರಿಸರಗಳ ದೊಡ್ಡ ವ್ಯಾಪ್ತಿಯನ್ನು ನೋಡಿಕೊಳ್ಳಲು ಉದ್ಧೇಶಿಸಿರುವವುಗಳಾಗಿವೆ. ಸುರಕ್ಷತಾ ಅಗತ್ಯತೆಗಳು ಸುರಕ್ಷತೆಯ ವಿನ್ಯಾಸಗೊಳಿಕೆ ಮತ್ತು ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ನ ಅಳವಡಿಕೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತದೆ. ಈ ವಿಷಯಗಳೆಂದರೆ, ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್ ಗುಣವಿಶೇಷಗಳು, ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್ ಪೋರ್ಟುಗಳು ಮತ್ತು ಇಂಟರ್ಫೇಸಸ್; ಪಾತ್ರಗಳು, ಸೇವೆಗಳು, ಮತ್ತು ದೃಢೀಕರಣ; ಫೈನೇಟ್ ಸ್ಟೇಟ್ ಮಾದರಿ; ಭೌತಿಕ ಸುರಕ್ಷತೆ; ಕಾರ್ಯನಿರ್ವಹಣಾ ಪರಿಸರ; ಕ್ರಿಪ್ಟೋಗ್ರಾಫಿಕ್ ಕೀಲಿ ವ್ಯವಸ್ಥಾಪನೆ; ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್ಫೇಸಸ್/ಎಲೆಕ್ಟ್ರೋಮ್ಯಾಗ್ನೆಟಿಕ್ ಕಂಪ್ಯಾಟಿಬಿಲಿಟಿ (EMI/EMC); ಸ್ವಯಂ-ಪರೀಕ್ಷೆಗಳು; ವಿನ್ಯಾಸ ಖಾತರಿಪಡಿಕೆ; ಮತ್ತು ಇತರೆ ಧಾಳಿಗಳ ಉಪಶಮನ.
Red Hat Enterprise Linux 6.5 NSA ಸೂಟ್ B ಕ್ರಿಪ್ಟೋಗ್ರಾಫಿ ಸುಧಾರಣೆಗಳು ಮತ್ತು ಪ್ರಮಾಣಪತ್ರಗಳು. ಈ ಕ್ರಿಪ್ಟೋಗ್ರಾಫಿಕ್ ಅಲ್ಗಾರಿತಮ್‌ಗಳು ಅತ್ಯಂತ ಸುರಕ್ಷಿತವಾದ ಜಾಲಬಂಧ ಸಂವಹನವನ್ನು ಒದಗಿಸುತ್ತದೆ. NIST 800 - 131 ಅಡಿಯಲ್ಲಿ ಬರುವ ಸರ್ಕಾರಿ ಸಂಸ್ಥೆಗಳಿಗಾಗಿ NSA SUITE B ನ ಅಗತ್ಯವಿರುತ್ತದೆ. NSA ಸೂಟ್ B ಕ್ರಿಪ್ಟೋಗ್ರಾಫಿಯ ಘಟಕಗಳು ಈ ಕೆಳಗಿನವುಗಳನ್ನು ಹೊಂದಿರುತ್ತವೆ:
 • ಅಡ್ವಾನ್ಸಡ್ ಎನ್ಕ್ರಿಪ್ಶನ್ ಸ್ಟ್ಯಾಂಡರ್ಡ್ (AES) ಎನ್ಕ್ರಿಪ್ಶನ್ GCM ಕ್ರಮದ ಕಾರ್ಯಾಚರಣೆ
 • ಎಲಿಪ್ಟಿಕ್ ಕರ್ವ್ ಡಿಫಿ-ಹೆಲ್ಮಾನ್ (ECDH)
 • ಸೆಕ್ಯೂರ್ ಹ್ಯಾಶ್ ಅಲ್ಗಾರಿತಮ್ 2 (SHA-256)
ಮಾನ್ಯಗೊಳಿಕೆ ಪ್ರಕ್ರಿಯೆಯಲ್ಲಿ ಈ ಕೆಳಗಿನ ಗುರಿಗಳು ಇರುತ್ತವೆ:
 • NSS FIPS-140 ಹಂತ 1
 • ಸೂಟ್ B ಎಲಿಪ್ಟಿಕಲ್ ಕರ್ವ್ ಕ್ರಿಪ್ಟೋಗ್ರಫಿ (ECC)
 • OpenSSH (ಕ್ಲೈಂಟ್ ಮತ್ತು ಸರ್ವರ್)
 • Openswan
 • dm-crypt
 • OpenSSL
 • ಕರ್ನಲ್ ಕ್ರಿಪ್ಟೊ
 • AES-GCM, AES-CTS, AES-CTR ಸಿಫರ್

FSTEK ಸರ್ಟಿಫಿಕೇಶನ್

ರಶಿಯನ್ ಫೆಡರೇಶನ್ ವಿದೇಶೀ ಮಾರಾಟಗಾರ ಸುರಕ್ಷತಾ ಹೇಳಿಕೆಗಳನ್ನು ನಿರ್ಧರಿಸುವ ಕಾಮನ್ ಕ್ರೈಟೀರಿಯಾ ಸರ್ಟಿಫಿಕೇಶನ್‌ಗೆ ಸಂಬಂಧಿಸಿದಂತೆ ವಿನ್ಯಾಸಗೊಳಿಸಲಾದ ತನ್ನದೆ ಆದ ಪ್ರಮಾಣಪತ್ರ ಪ್ರಕ್ರಿಯೆಯನ್ನು ಹೊಂದಿದೆ. ವಿದೇಶಿ ಮಾರಾಟಗಾರರು ಮಾಹಿತಿ ಸುರಕ್ಷತಾ ಉತ್ಪನ್ನಗಳು ಮತ್ತು ಸೇವೆಗಳನ್ನು, ಅದರಲ್ಲೂ ವಿಶೇಷವಾಗಿ ರಶಿಯನ್ ಸರ್ಕಾರಿ ಸಂಸ್ಥೆಗಳಿಗೆ ಒದಗಿಸಲು ಫೆಡರಲ್ ಸರ್ವಿಸ್ ಫಾರ್ ಟೆಕ್ನಿಕಲ್ ಅಂಡ್ ಎಕ್ಸ್‍ಪೋರ್ಟ್ ಕಂಟ್ರೋಲ್ (FSTEK) ಪ್ರಮಾಣಪತ್ರದ ಅಗತ್ಯವಿರುತ್ತದೆ.
ಲೈಸೆನ್ಸಿಂಗ್ ಮಾಹಿತಿ ಸುರಕ್ಷತಾ ತಂತ್ರಜ್ಞಾನದ ಜೊತೆಗೆ, FSTEK ಸಂಸ್ಥೆಯು ದೇಶದ ರಫ್ತು ನಿಯಂತ್ರಣ ಆಡಳಿತವನ್ನು ನೋಡಿಕೊಳ್ಳುತ್ತದೆ. ಇದರಲ್ಲಿ ನಾಗರಿಕ ಮತ್ತು ಸೈನ್ಯದ ಎರಡೂ ಕ್ಷೇತ್ರದ ಅಗತ್ಯಗಳಿಗೆ ಬಳಸಬಹುದಾದ ದ್ವಿ-ಬಳಕೆ ತಂತ್ರಜ್ಞಾನಗಳ ರಫ್ತನ್ನು ನಿಯಂತ್ರಿಸುವುದೂ ಸಹ ಒಳಗೊಂಡಿದೆ.
ಉತ್ಪನ್ನವು ಖಾಸಗಿ ಮಾಹಿತಿಯನ್ನು ಶೇಖರಿಸಿ ಇರಿಸುವುದಾದರೆ ಅಥವ ಸಂಸ್ಕರಿಸುವುದಾದರೆ ವಿದೇಶಿ ಮಾರಾಟಗಾರರಿಗಾಗಿನ FSTEK ಪ್ರಮಾಣೀಕರಣವು ಒಂದು ನ್ಯಾಯಾಂಗ ಅಗತ್ಯವಾಗಿರುತ್ತದೆ ಮತ್ತು ಇದು ರಶಿಯನ್ ಫೆಡರೇಶನ್‌ನಲ್ಲಿನ Red Hat ಬ್ರಾಂಡಿನ ಅಡಿಯಲ್ಲಿ ಸಂಯುಕ್ತ ಮತ್ತು ವಾಣಿಜ್ಯ ಮಾರಾಟಗಳನ್ನು ಕಾನೂನುಬದ್ಧಗೊಳಿಸುತ್ತದೆ.
FSTEK ಪ್ರಮಾಣೀಕರಣವು ಒಂದು ನಿರ್ದಿಷ್ಟ Red Hat Enterprise Linux 6 ಕಿರು ಬಿಡುಗಡೆಯ ಮೇಲೆ ಆಧರಿತವಾಗಿರುವುದಿಲ್ಲ ಮತ್ತು ಇದು ಪ್ರಮಾಣೀಕರಣದ ಜೀವನಚಕ್ರದ ಅವಧಿಯಲ್ಲಿ ಸಂಪೂರ್ಣ Red Hat Enterprise Linux 6 ಬಿಡುಗಡೆಗೆ ಪ್ರಮಾಣೀಕರಣವನ್ನು ನೀಡುತ್ತದೆ.

ಅಧ್ಯಾಯ 10. ಡೆಸ್ಕ್‍ಟಾಪ್ ಮತ್ತು ಗ್ರಾಫಿಕ್ಸ್

ಗ್ರಾಫಿಕ್ಸ್ ಅಪ್‌ಡೇಟ್‌ಗಳು ಮತ್ತು ಹೊಸ ಹಾರ್ಡವೇರ್ ಬೆಂಬಲ

Red Hat Enterprise Linux 6.5 ನಲ್ಲಿ ಗ್ರಾಫಿಕ್ಸ್ ಅಪ್‌ಡೇಟ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
 • ಭವಿಷ್ಯದ Intel ಮತ್ತು AMD ಸಾಧನಗಳು
 • ಸ್ಪೈಸ್ ಸುಧಾರಣೆಗಳು
 • ಸುಧಾರಿತ ಬಹು ತೆರೆ ಬೆಂಬಲ ಮತ್ತು ಸ್ಪರ್ಶ ತೆರೆ ಬೆಂಬಲ

gdm ಅನ್ನು ಅಪ್‌ಡೇಟ್ ಮಾಡಲಾಗಿದೆ

gdm ಅನ್ವಯಕ್ಕೆ ಮಾಡಲಾದ ಬದಲಾವಣೆಯು ಗುಪ್ತಪದ ವಾಯಿದೆ ತೀರಿಕೆ, ಮಲ್ಟಿ-ಸೀಟ್ ಬೆಂಬಲ ಮತ್ತು ಸ್ಥಳೀಯ ಇಂಟರಾಪರೇಬಿಲಿಟಿಯ ತೊಂದರೆಯ ಸರಿಪಡಿಕೆಗಳನ್ನು ಒಳಗೊಂಡಿರುತ್ತದೆ.

Evolution ಅನ್ನು ನವೀಕರಿಸಲಾಗಿದೆ

Microsoft Exchange ನೊಂದಿಗೆ ಇಂಟರ್ಆಪರೇಬಲ್‌ ಸುಧಾರಿಸುವ ಉದ್ಧೇಶದಿಂದ Evolution ಅನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ನವೀಕರಿಸಲಾಗಿದೆ. ಇದರಲ್ಲಿ ಹೊಸ Exchange Web Service (EWS), ಸುಧಾರಿತ ಮೀಟಿಂಗ್ ಬೆಂಬಲ ಮತ್ತು ಸುಧಾರಿತ ಪತ್ರಕೋಶ ಬೆಂಬಲವನ್ನು ಒಳಗೊಂಡಿದೆ.

LibreOffice ಅನ್ನು ರೀಬೇಸ್ ಮಾಡಲಾಗಿದೆ

Red Hat Enterprise Linux 6.5 ಬಿಡುಗಡೆಯಲ್ಲಿ, LibreOffice ಅನ್ನು ಅಪ್‌ಸ್ಟ್ರೀಮ್ ಆವೃತ್ತಿ 4.0.4 ಕ್ಕೆ ನವೀಕರಿಸಲಾಗಿದೆ.

AMD GPUಗಳಿಗಾಗಿ ಬೆಂಬಲ

Red Hat Enterprise Linux 6.5 ಗೆ ಇತ್ತೀಚಿನ AMD ಗ್ರಾಫಿಕ್ಸ್ ಸಂಸ್ಕಾರಕ ಘಟಕಗಳಿಗಾಗಿ (GPUಗಳು) ಬೆಂಬಲವನ್ನು ಸೇರಿಸಲಾಗಿದೆ

NetworkManager ನಲ್ಲಿ ಅಲಿಯಾಸ್ ಬೆಂಬಲ

NetworkManager ಗೆ ಅಲಿಯಾಸ್ ಬೆಂಬಲವನ್ನು ಸೇರಿಸಲಾಗಿದೆ. ಆದರೆ, ಆದರೆ ಬಳಕೆದಾರರು ಬದಲಿಗೆ ಬಹು ಅಥವ ಸೆಕೆಂಡರಿ IP ಸೌಲಭ್ಯವನ್ನು ಬಳಸುವಂತೆ ಬಲವಾಗಿ ಸಲಹೆ ಮಾಡಲಾಗುತ್ತದೆ.

ಅಧ್ಯಾಯ 11. ಕಾರ್ಯನಿರ್ವಹಣೆ ಮತ್ತು ಸ್ಕೇಲೆಬಿಲಿಟಿ

KSM ಸಂವರ್ಧನೆಗಳು

ಪುಟಗಳನ್ನು ಒಟ್ಟುಗೂಡಿಸುವಾಗ ನಾನ್-ಯುನಿಫಾರ್ಮ್ ಮೆಮೊರಿ ಎಕ್ಸೆಸ್ (NUMA) ಅನ್ನು ಪರಿಗಣಿಸುವಂತೆ ಕರ್ನಲ್ ಶೇರ್ಡ್ ಮೆಮೊರಿಯನ್ನು (KSM) ಅನ್ನು ಸುಧಾರಿಸಲಾಗಿದೆ, ಇದು ವ್ಯವಸ್ಥೆಯಲ್ಲಿನ ಅನ್ವಯಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಜೊತೆಗೆ, Red Hat OpenShift ನಲ್ಲಿ ಲಭ್ಯವಿರುವ ಅನ್ವಯಗಳ ಸಾಂದ್ರತೆಯನ್ನು ಹೆಚ್ಚಿಸಲು ಹೆಚ್ಚುವರಿ ಪುಟದ ಬಗೆಗಳನ್ನು ಸೇರಿಸಲಾಗಿದೆ.

tuned ಅಪ್‌ಡೇಟ್‌ಗಳು

ನಿರ್ದಿಷ್ಟ ಸನ್ನಿವೇಶಗಳಿಗಾಗಿ ಸೂಕ್ತವಾದ ಕಾರ್ಯನಿರ್ವಹಣೆಯನ್ನು ಒದಗಿಸುವಂತೆ tuned ಪ್ರೊಫೈಲುಗಳನ್ನು ಪರಿಷ್ಕರಿಸಲಾಗಿದೆ.

ಅಧ್ಯಾಯ 12. ಕಂಪೈಲರ್ ಹಾಗು ಉಪಕರಣಗಳು

ಸ್ವಯಂಚಾಲಿತ ದೋಷ ವರದಿ ಮಾಡುವ ಉಪಕರಣ (ABRT),ವರದಿಗಾರಗಳಲ್ಲಿನ ಪೂರ್ವನಿಯೋಜಿತ ಸೆಟ್‌ನಲ್ಲಿನ ಬದಲಾವಣೆ

abrt-cli --report DIR ಆದೇಶವನ್ನು ಚಲಾಯಿಸುವುದರಿಂದ ಈಗ ಕೆಳಗಿನ ವರದಿಗಾರಗಳ ಆಯ್ಕೆಯನ್ನು ತೋರಿಸುತ್ತದೆ:
ನೀವು ತೊಂದರೆಯ ಕುರಿತು ವರದಿಯನ್ನು ಹೇಗೆ ಸಲ್ಲಿಸಲು ಬಯಸುವಿರಿ?
 1) ಹೊಸ Red Hat ಸಪೋರ್ಟ್ ಪ್ರಕರಣ
 2) ಈಗಿರುವ ಒಂದು Red Hat ಸಪೋರ್ಟ್ ಪ್ರಕರಣ
 3) tar ಆರ್ಕೈವ್‌ಗೆ ಉಳಿಸು

ಘಟಕದ ಆವೃತ್ತಿಗಳು

ಈ ಅನುಬಂಧವು Red Hat Enterprise Linux 6.5 ಬಿಡುಗಡೆಯಲ್ಲಿನ ಘಟಕಗಳು ಹಾಗು ಅವುಗಳ ಆವೃತ್ತಿಗಳ ಒಂದು ಪಟ್ಟಿಯಾಗಿರುತ್ತದೆ.
ಘಟಕ
ಆವೃತ್ತಿ
ಕರ್ನಲ್
2.6.32-421
QLogic qla2xxx ಚಾಲಕ
8.04.00.08.06.4-k
QLogic ql2xxx ಫರ್ಮವೇರ್
ql23xx-firmware-3.03.27-3.1
ql2100-firmware-1.19.38-3.1
ql2200-firmware-2.02.08-3.1
ql2400-firmware-7.00.01-1
ql2500-firmware-7.00.01-1
ಎಮ್ಯಲೆಕ್ಸ್ lpfc ಚಾಲಕ
8.3.7.21.1p
iSCSI ಆರಂಭಕ ಸವಲತ್ತುಗಳು
iscsi-initiator-utils-6.2.0.873-9
DM-ಮಲ್ಟಿಪಾತ್
device-mapper-multipath-0.4.9-71
LVM
lvm2-22.02.100-4
ಕೋಷ್ಟಕ A.1. ಘಟಕದ ಆವೃತ್ತಿಗಳು

ಪರಿಷ್ಕರಣ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1.0-7Thu Nov 21 2013Eliška Slobodová
Red Hat Enterprise Linux 6.5 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.
ಪರಿಷ್ಕರಣೆ 1.0-3Thu Oct 3 2013Eliška Slobodová
Red Hat Enterprise Linux 6.5 Beta ದ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.